ಲಿಂಗ ಜಂಗಮ, ಜಂಗಮ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಲಿಂಗ ಜಂಗಮ
ಜಂಗಮ ಲಿಂಗವೆಂಬುದ ಎನಗೆ ತೋರಿದವರಾರಯ್ಯಾ ಲಿಂಗವ ಪೂಜಿಸಿದಡೆ ಭವ ಹರಿಯದೆಂದು
ಜಂಗಮಮುಖ ಲಿಂಗವಾಗಿ ಬಂದು ಶಿಕ್ಷಿಸಿ
ರಕ್ಷಿಸಿ
ಎನ್ನ ಆದಿ ಅನಾದಿಯ ತೋರಿ
ಪ್ರಾಣಲಿಂಗ ಜಂಗಮವೆಂದು ಎನಗೆ ಪ್ರತಿಷಿ*ಸಿ ತೋರಿದಿರಾಗಿ
ಕೂಡಲಸಂಗಮದೇವಾ
ನಿಮ್ಮಿಂದಲಾನು ಬದುಕಿದೆನು ಕಾಣಾ
ಪ್ರಭುವೆ.