ಲಿಂಗ ಜಂಗಮ ಭಕ್ತನೆಂದು
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಲಿಂಗ ಜಂಗಮ ಭಕ್ತನೆಂದು ಈ ಮೂರಾದುದು ಒಂದೇ ವಸ್ತು ನೋಡ. ಚಿನ್ನಾದ ಸ್ವರೂಪವೇ ಜಂಗಮ. ಚಿದ್ಬಿಂದು ಸ್ವರೂಪವೇ ಲಿಂಗ. ಈ ನಾದ ಬಿಂದುವಿಂಗೆ ಆಧಾರವಾದ ಚಿತ್ಕಲಾ ಸ್ವರೂಪವೇ ಚಿನ್ಮಯ ಭಕ್ತನು ನೋಡ. ಶಿವಂಗೂ ಭಕ್ತಂಗೂ ಭಿನ್ನಮುಂಟೆ? ಆ ಭಕ್ತಿಗೂ ಭಕ್ತಂಗೂ ಭೇದವುಂಟೆ? ಇಲ್ಲವಾಗಿ- ದೇವ ಬೇರೆ ಭಕ್ತ ಬೇರೆ ಎಂಬ ಕರ್ಮಕಾಂಡಿಗಳ ಮತವಂತಿರಲಿ. ನಿಮ್ಮ ಶರಣರಿಗೆ ನಿಮಗೆ ಭಿನ್ನವಿಲ್ಲವೆಂದೆನು ಕಾಣ. ಶರಣನೇ ಸಾಕ್ಷಾತ್ ಶಿವ ತಾನೇ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.