ಲಿಂಗ ನೋಡಿದರೆ ನೋಡುವ ಲಿಂಗ ಕೇಳಿದರೆ ಕೇಳುವ ಲಿಂಗ ಮುಟ್ಟಿದರೆ ಮುಟ್ಟುವ ಲಿಂಗ ರುಚಿಸಿದರೆ ರುಚಿಸುವ ಲಿಂಗ ವಾಸಿಸಿದರೆ ವಾಸಿಸುವ ಲಿಂಗ ಕ್ರೀಡಿಸಿದರೆ ಕ್ರೀಡಿಸುವ. ಇಂತಪ್ಪ ಲಿಂಗ ಪ್ರಸಾದಭೋಗದಲ್ಲಿ ಪರಿಣಾಮಿ ಗುಹೇಶ್ವರಾ ನಿಮ್ಮ ಶರಣ.