Library-logo-blue-outline.png
View-refresh.svg
Transclusion_Status_Detection_Tool

ಲಿಂಗ ಬಿದ್ದಿತು, ಲಿಂಗ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಲಿಂಗ ಬಿದ್ದಿತು
ಲಿಂಗ ಬಿದ್ದಿತೆಂಬರಯ್ಯಾ. ಲಿಂಗ ಬೀಳಿಲು ಬಲ್ಲುದೆ ? ಭೂಮಿ ತಾಳಲು ಬಲ್ಲುದೆ ? ಕಮ್ಮಾರ ಕಡೆದು ಮಾರಿದ
ಬೋಗಾರ ತಂದು ಮಾರಿದ
ಗುರು ಕೊಂಡು ಮಾರಿದ ಈ ಲಿಂಗ ಬಿದ್ದಡೆ ಸಮಾಧಿಯುಂಟೆ ? ಲಿಂಗವ ಕಟ್ಟಿದ ಗುರು ಸತ್ತಡೆ ಸಮಾಧಿಯನೇಕೆ ಕೊಳ್ಳರೊ ಕೂಡಲಚೆನ್ನಸಂಗಮದೇವಾ ?