ಲಿಂದಿಂದಲಿ ಗುರು, ಲಿಂಗದಿಂದಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲಿಂದಿಂದಲಿ ಗುರು
ಲಿಂಗದಿಂದಲಿ ಜಂಗಮ
ಲಿಂಗದಿಂದಲಿ ಪಾದೋದಕ ಪ್ರಸಾದ
ಲಿಂಗದಿಂದಲಿ ಸರ್ವವೆಲ್ಲಾ ಆಯಿತ್ತು. (ಅವು) ನಮ್ಮ ಕರಸ್ಥಲದೊಳಗೆ ಇಲ್ಲವೆಂಬ ಸುರಾಭುಂಜಕರ ಮಾತ ಕೇಳಲಾಗದು. ಅದೆಂತೆಂದರೆ: ಲಿಂಗ ಘನೆಂಬಿರಿ ಅದೆಂತು ಘನವಹುದು ? ನಮ್ಮ ಜಂಗಮದೇವರ ಅಷ್ಟಕೋಟಿರೋಮ ಕೂಪದೊಳಗೆ
ಒಂದು ರೋಮ ತಾ ಇಷ್ಟಲಿಂಗ. ಇಷ್ಟಲಿಂಗವನೆ ಘನವ ಮಾಡಿ ದೃಷ್ಟಜಂಗಮವನತಿಗಳೆವ ಭ್ರಷ್ಟಹೊಲೆಯರ ಮಾತ ಕೇಳಲಾಗದು. ಅದೆಂತೆಂದರೆ: ಎನ್ನ ಜಂಗಮದೇವರ ಹಾಗೆ ಪಾದಾರ್ಚನೆಯ ಮಾಡಿಸಿಕೊಂಡು ಪಾದತೀರ್ಥ ಪ್ರಸಾದವ ಕೊಟ್ಟು ಪಾಲಿಸಬಲ್ಲುದೆ ಲಿಂಗವು ? ಮತ್ತೆನ್ನ ಜಂಗಮದೇವರ ಹಾಗೆ ಒಕ್ಕು ಮಿಕ್ಕುದನಿಕ್ಕಿ ಸಲಹಬಲ್ಲುದೆ ಲಿಂಗವು ? ಮತ್ತೆನ್ನ ಜಂಗಮದೇವರ ಹಾಗೆ
ಅರ್ಥಪ್ರಾಣ ಅಭಿಮಾನವನಿತ್ತಡೆ ಸ್ವೀಕಾರವ ಮಾಡಬಲ್ಲುದೆ ಲಿಂಗವು ? ಲಿಂಗ ಆವುದನು ಕೊಡಲರಿಯದು ರಾಸಿಗೆ ಅರ್ಚಿಸಿದ ಲಚ್ಚಣ ರಾಸಿಯನೊಳಕೊಂಬುದೆ
ರಾಸಿಯ ಒಡೆಯನಲ್ಲದೆ ? ಭಕ್ತನೆಂಬ ರಾಸಿಗೆ ಲಿಂಗವೆಂಬ ಲಚ್ಚಣ ಇದಕ್ಕೆನ್ನ ಜಂಗಮದೇವರೆ ಮುದ್ರಾಧಿಪತಿ ಕಾಣಾ ಕೂಡಲಚೆನ್ನಸಂಗಮದೇವಾ.