ಲಿ೦ಡಾ ಬಾರ್ಕರ್
ಲಿ೦ಡಾ ಬಾರ್ಕರ್ ಅವರು(ಜನನ ೨೬ ಅಕ್ಟೋಬರ್ ೧೯೬೧) ರಲ್ಲಿ ಇ೦ಗ್ಲಿಷ್ ಆ೦ತರಿಕ ವಿನ್ಯಾಸಕಿ ಮತ್ತು ದೂರದರ್ಶಕ ನಿರೂಪಕರಾಗಿದ್ದರು.
ಶಿಕ್ಷಣ
[ಸಂಪಾದಿಸಿ]ಲಿ೦ಡಾ ಬಾರ್ಕರ್ ಅವರು ಇಂಗ್ಲೆಂಡ್ ದೇಶದ ಯಾರ್ಕ್ಷೈರ್ ಪಶ್ಚಿಮ ರೈಡಿಂಗಿನಲ್ಲಿರುವ ಶೆಲ್ಫ್ ಗ್ರಾಮದಲ್ಲಿ ಹುಟ್ಟಿದರು.ಇವರು ಮೊದಲು ಬ್ರಾಡ್ಫೋರ್ಡ್ ಗರ್ಲ್ಸ್ ಗ್ರಾಮರ್ ಶಾಲೆಯಲ್ಲಿ ಶಿಕ್ಶಣ ಪಡೆದ ನ೦ತರ ಫರ್ನ್ಹ್ಯಾಮ್ ನಲ್ಲಿರುವ ಸರ್ರೆ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆ೦ಡ್ ಡಿಸೈನ್(ಈಗ ಅದನ್ನು ಯೂನಿವರ್ಸಿಟಿ ಫಾರ್ ದಿ ಕ್ರಿಯೇಟಿವ್ ಆರ್ಟ್ಸ್ ಎ೦ದು ಕರೆಯಲಾಗಿದೆ)ಕಾಲೆಜಿನಲ್ಲಿ ಲಲಿತ ಕಲೆಯ ಶಿಕ್ಶಣ ಪಡೆದರು.ಆ೦ತರಿಕ ವಿನ್ಯಾಸಗಾರಳಾಗಿ ವೃತ್ತಿಯಲ್ಲಿ ನೆಲೆಸುವ ಮೊದಲು ಫ್ಯಾಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಮಾಡಿದರು.ಒಬ್ಬ ಯಶಸ್ವಿ ವರ್ಣಚಿತ್ರಕಾರರಾಗಿ ಬ್ಯಾಟರ್ಸೀಯಲ್ಲಿ ತನ್ನ ಫ್ಲಾಟ್ ಅನ್ನು ಮಾಡಿ, ಹೌಸ್ ಬ್ಯೂಟಿಫುಲ್ ಪತ್ರಿಕೆಯಲ್ಲಿ ಅವರ ಆಂತರಿಕಗೆ ನೀಡಿದ ಕೊಡುಗೆಗಳ ವಿಷಯಗಳು ಬಹಳ ಶ್ರೇಷ್ಟವಾದುದು.
ವೃತ್ತಿಜೀವನ
[ಸಂಪಾದಿಸಿ]ದೂರದರ್ಶನದಲ್ಲಿ ವಿನ್ಯಾಸಕರಾಗಿ ಕೆಲಸವನ್ನು ಪ್ರಾರ೦ಭಿಸಿದಾಗ ಅವರ ಪತಿಯಾದ ಕ್ರಿಸ್ ಶಾರ್ಟ್ ಅವರನ್ನು ಭೇಟಿಯಾದರು. ೧೯೯೪ ರಲ್ಲಿ ಬಿಬಿಸಿ ಸ೦ಪರ್ಕದಾರರು ಬಾರ್ಕರನ್ನು "ಚೇ೦ಜಿ೦ಗ್ ರೂಮ್ಸ್" ಎ೦ಬ ಕಾರ್ಯಕ್ರಮದಲ್ಲಿ ಅಭಿನಯಿಸಿದ ವಿನ್ಯಾಸಕರಾದ ಲಾರೆನ್ಸ್ ಲೆವೆಲಿನ್-ಬೋವೆನ್ ಅವರ ಜೊತೆಗೆ ಇವರು ಪಾತ್ರಗೊ೦ಡರು,ಈ ಕಾರ್ಯಕ್ರಮ ಎರಡು ವರ್ಷಗಳು ನಡೆದವು. ಇದೆ ಸಮಯದಲ್ಲಿ "ಹೌಸ್ ಇನ್ವೇಡರ್ಸ್" ೧೯೯೯ ರ ಮತ್ತು ೨೦೦೧ ರ ಮೂರು ಭಾಗವಾಗಿ "ಪ್ಲಾನೆಟ್ ಕ್ರಿಸ್ಮಸ್" ಎ೦ಬ ಕಾರ್ಯಕ್ರಮಕ್ಕೆ ಬಾರ್ಕರ್ ಅವರು ಸಹ ನಿರೂಪಣೆಯಾಗಿದ್ದರು. ಆರು ವರ್ಷಗಳ ನ೦ತರ ವಾಣಿಜ್ಯ ಅನುಮೋದನೆಯ ಕುರಿತು ಬಿಬಿಸಿಯ ಸ್ಥಾನದಿಂದ ನಿರ್ಬಂಧಿಸಲ್ಪಟ್ಟಿದರಿ೦ದ ಕರೋಲ್ ಸ್ಮಿಲ್ಲಿಗೆ ಬದಲಿ ನಿರೂಪಕರಾಗಿ ಕಡೆಗಣಿಸಬಾರದೆಂದು ನಿರಾಶೆಗೊಂಡ ಬಾರ್ಕರ್ ಅವರು ಕೊಠಡಿಗಳನ್ನು ಬಿಡಲು ಒಪ್ಪಿಕೊಂಡರು. ಬಾರ್ಕರ್ ಅವರು ಐಟಿವಿ ಸ೦ಪರ್ಕದಾರಿಯ ಕಾರ್ಯಕ್ರಮವಾದ "ಐ ಆಮ್ ಎ ಸೆಲೆಬ್ರಿಟಿ ... ಗೆಟ್ ಮಿ ಔಟ್ ಆಫ್ ಹಿಯರ್!"ರ ಎರಡನೇ ಸರಣಿಯಲ್ಲಿ ಕಾಣಿಸಿಕೊಳ್ಳುವುದರ ಮೂಲಕ ತನ್ನ ಹೆಚ್ಚು ವಾಣಿಜ್ಯ ಕೇಂದ್ರಿತ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅದರಲ್ಲಿ ಅವರು ಅಂತಿಮ ದಿನದಲ್ಲಿ ಮೂರನೇ ಸ್ಥಾನದಲ್ಲಿ ಮುಗಿಸಿದರು.ಬಾರ್ಕರ್ ಅವರು ಹೊಸ ವೈಯಕ್ತಿಕ ಚಿತ್ರಣವನ್ನು ಅಳವಡಿಸಿಕೊಂಡರು, ಇದು ಹುಡುಗರಿಗೆ ಸಂಬಂಧಿಸಿದೆ 'ಪತ್ರಿಕೆ ಚಿಗುರುಗಳು" ಮತ್ತು ಯೋಗ ಡಿವಿಡಿ ತಯಾರಿಸುವಲ್ಲಿ ಒಳಗೊಂಡಿತ್ತು. ಬಾರ್ಕರ್ ಅವರು ವಾಣಿಜ್ಯಿಕವಾಗಿ ಥಾಮ್ಸನ್ ಹಾಲಿಡೇಸ್ ಅವರ ಡಿಎಫ್ಎಸ್ ಮತ್ತು ಕ್ಯಾಬಿನ್ಗಳಿಗಾಗಿ ಸೋಫಾಗಳನ್ನು ವಿನ್ಯಾಸಗೊಳಿಸಿದರು ಮತ್ತು ಅದಕ್ಕೆ ಪ್ರಚಾರ ಮಾಡಿದರು. ಅವರು ತನ್ನದೇ ಆದ ಗೋಡೆ ಕಾಗದ ವ್ಯಾಪ್ತಿಯನ್ನು ಕಿರೀಟದಿಂದ ಹೊರತಂದಿದ್ದರು. ಬಾರ್ಕರ್ ಅವರು "ವಿತ್ ಎ ಲಿಟಲ್ ಹೆಲ್ಪ್ ಫ್ರಾಮ್ ಮೈ ಫ್ರೆಂಡ್ಸ್" ಕಾರ್ಯಕ್ರಮವನ್ನು, ಐಟಿವಿಗಾಗಿ ಸರಣಿಯನ್ನು ಪ್ರಸ್ತುತಪಡಿಸಲು ಪ್ರಾರಂಭಿಸಿದರು. ೨೦೦೭ ರಲ್ಲಿ ಬಾರ್ಕರ್ ಅವರು ಮಕ್ಕಳ ಸಿಬಿಬಿಸಿ ಪ್ರದರ್ಶನದಲ್ಲಿ "ಹೈಡರ್ ಇನ್ ದಿ ಹೌಸ್" ಎ೦ಬ ಹೆಸರಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ೨೦೦೮ ರಲ್ಲಿ ಪ್ರಸಿದ್ಧವಾದ "ಕಮ್ ಡೈನ್ ವಿತ್ ಮಿ" ಕಾರ್ಯಕ್ರಮದಲ್ಲಿ ಪೀಟರ್ ಸ್ಟ್ರಿಂಗ್ಫೆಲೋ, ಮಿಚೆಲ್ ಹೀಟನ್ ಮತ್ತು ಲೀ ರಯಾನ್ ಜೊತೆಯಲ್ಲಿ ಕಾಣಿಸಿಕೊಂಡರು. ಲಿಯಾನ್ ರಯಾನ್ ಜೊತೆಗೆ ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದರು, ಇಬ್ಬರೂ ೨೬ ಅಂಕಗಳನ್ನು ಗಳಿಸಿದರು. ೨೦೦೯ ಲ್ಲಿ, ಬಾರ್ಕರ್ ಅವರು ಐಟಿವಿ ಹಗಲಿನ ಸರಣಿಯಲ್ಲಿ ೬೦ ನಿಮಿಷದ ವಿನ್ಯಾಸ ತಂಡಕ್ಕೆ ಸೇರಿಕೊಂಡರು. ೨೦೧೩ ರಲ್ಲಿ ಬಾರ್ಕರ್ ಅವರು "ಸ್ಪ್ಲಾಷ್" ಐಟಿವಿಯ ಕಾರ್ಯಕ್ರಮದಲ್ಲಿ ಒಲಿ೦ಪಿಕ್ ಧುಮುಕುವವನಾದ ಟಾಮ್ ಡೇಲಿ ಅವರ ಜೊತೆಗೆ ಪಾಲ್ಗೊ೦ಡರು. ೨೦೧೭ ಲ್ಲಿ, ಲಿ೦ಡಾ ಅವರು " ದಿ ಹೋಮ್ ಗೇಮ್" ಅನ್ನುವ ಐತಿವಿಗಾಗಿ ಪ್ರಸ್ತುತಪಡಿಸಿದರು.
ವೈಯಕ್ತಿಕ
[ಸಂಪಾದಿಸಿ]ಲಿ೦ಡಾ ಬಾರ್ಕರ್ ಅವರು ದೂರದರ್ಶನದ ಕಾರ್ಯನಿರ್ವಾಹಕರಾದ ಕ್ರಿಸ್ ಶಾರ್ಟ್ ಅವರನ್ನು ಮದುವೆಯಾಗಿದರು. ಈ ಇಬ್ಬರ ದ೦ಪತಿಗಳಿಗೆ ಒ೦ದು ಮಗಳನ್ನು ಜನ್ಮವಿತ್ತರು. ಪ್ರಾಣಿ ಪ್ರೇಮಿಯಾದ ಲಿ೦ಡಾ ಬಾರ್ಕರ್ ಅವರು ಮನೆಯಲ್ಲಿ ಎರಡು ನಾಯಿಗಳನ್ನು ಸಾಕುತ್ತಿದ್ದಾರೆ.
ಉಲ್ಲೇಖಗಳು
[ಸಂಪಾದಿಸಿ]1)^ "Linda Barker profile: news, photos, style, videos and more HELLO! Online". Hellomagazine.com. Retrieved 2013-05-01. 2)^ Shakinovsky, Tania; Conlan, Tara. "Linda Barker goes commercial | Mail Online". London: Dailymail.co.uk. Retrieved 2013-05-01. 3)^ Alix Walker and Sian Merrylees (2010-11-17). "Linda Barker on motherhood – Online dating | Relationship advice". Woman and Home. Retrieved 2013-05-01 4)^ http://www.express.co.uk/life-style/life/789777/Linda-Barker-tv-presenter-interior-designer-five-things-cant-live-without Linda Barker.jpg (file)