ವಿಷಯಕ್ಕೆ ಹೋಗು

ಲೋಕದ ಕಾಳಜಿ

ವಿಕಿಸೋರ್ಸ್ದಿಂದ

ಲೋಕದ ಕಾಳಜಿ ಸಂತ ಶಿಶುನಾಳ ಷರೀಫ್ ರವರು ರಚಿಸಿರುವ ಒಂದು ಗೀತೆ. ಗೀತೆಯು ಉತ್ತರ ಕರ್ನಾಟಕದ ಉಪಭಾಷೆಯಲ್ಲಿ ರಚಿಸಲಾಗಿದೆ.[][]

ಲೋಕದ ಕಾಳಜಿ ಮಾಡತೇನಂತಿ
ನಿಂಗ್ಯಾರ್ ಬ್ಯಾಡಾಂತಾರ, ಮಾದಪ್ಪ ಚಿಂತಿ!

ನೀ ಮಾಡೋದು ಘಳಿಗಿ ಸಂತಿ
ಮೇಲು ಮಾಳಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಮಣ್ಣಲಿ ಇಳಿಯೂದ ಥಣ್ಣಗ ಮರತಿ!

[ಲೋಕದ ಕಾಳಜಿ...]

ಬದುಕು ಬಾಳೇವು ನಂದೇ ಅಂತಿ
ನಿಧಿ ಸೇರಿದಷ್ಟೂ ಸಾಲದು ಅಂತಿ
ಕದವ ತೆರೆದು ಕಡೆಯಾತ್ರೆಗೆ ನಡೆವಾಗ
ಒದಗದು ಯಾವುದೂ ಸುಮ್ಮನೆ ಅಳತಿ.

[ಲೋಕದ ಕಾಳಜಿ...]

ನೆಲೆಯು ಗೋವಿಂದನ ಪಾದದೊಳೈತಿ
ಅಲಕೊಂಡು ಹುಡುಕಿದಿರಿನೆಲ್ಲೈತಿ?
ಶಿಶುನಾಳಾಧೀಶನ ದಯೆಯೊಳಗೈತಿ
ರಸಿಕನು ಹಾಡಿದ ಕವಿತೆಯೊಳೈತಿ!

ಲೋಕದ ಕಾಳಜಿ ಮಾಡತೇನಂತಿ
ನಿಂಗ್ಯಾರ್ ಬ್ಯಾಡಾಂತಾರ, ಮಾದಪ್ಪ ಚಿಂತಿ!

ಉಲ್ಲೇಖಗಳು

[ಸಂಪಾದಿಸಿ]
  1. DHNS (22 March 2014). "Folksy rock". Deccan Herald. Retrieved 6 November 2023. 
  2. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ (1985). ಶಿಶುನಾಳ ಷರೀಫ್ ಸಾಹೇಬರ ಗೀತೆಗಳು. ಬೆಂಗಳೂರು: ಸಪ್ನ ಬುಕ್ ಹೌಸ್. p. 22. ISBN 9788128012587.