ಲೋಹವ ಅಗ್ನಿ ವೇಧಿಸಿಕೊಂಡಿಪ್ಪಂತೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಲೋಹವ ಅಗ್ನಿ ವೇಧಿಸಿಕೊಂಡಿಪ್ಪಂತೆ
ಕಲ್ಲಿನಲ್ಲಿ ಕಳೆ ತುಂಬಿಪ್ಪಂತೆ
ಸರ್ವಾಂಗವನು ಲಿಂಗಕಳೆ ತುಂಬಿ ಸರ್ವತೋಮುಖವಾಗಿ
ಮಿಸುನಿಯ ಚಿನ್ನದ ಬೆಳಗಿನಂತೆ ಪಸರಿಸುತ್ತಿಪ್ಪ
ಹೊಚ್ಚ ಹೊಸ ಬ್ರಹ್ಮವನೊಡಗೂಡಿದ ಪ್ರಾಣಲಿಂಗೈಕ್ಯವನೇನ ಉಪಮಿಸುವೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.