ವಂದಿಪೆ ನಮ್ಮ ಮುದ್ದು ಶಾರದೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ರಾಗ : ಮೋಹನ ತಾಳ: ಆದಿ

ವಂದಿಪೆ ನಮ್ಮ ಮುದ್ದು ಶಾರದೆ ಶರ ಶ್ಚಂದಿರ ವದನೆ ಶಾರದೆ || ಪ ||


ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ || ಅನು ಪಲ್ಲವಿ ||


ಸಿತಾಬ್ಜಾಸನೆ ಸುಖದಾಯಕಿ ಸುರ ನಾಥಾರಾಧಿತೆ ವಿಶ್ವನಾಯಕಿ ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆ ವೇದೋಪನಿಷದ್ಗೀತೆ ವಾಗ್ದೇವಿ ಮಾತೆ || ೧ ||

ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮುನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ಸಾಕು ಸಜ್ಜನರನ್ನು ವಾಕು ಮನ್ನಿಸು ತಾಯೆ || ೨ ||

ಪಾತಕಿಗಳೊಡನಾಡಿ ನಾ ನಿನ್ನ ಪೋತಾಬ್ಜಪದ ಭಜಿಸಧ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ ನ್ನಾಥ ವಿಠ್ಠಲನಂಘ್ರಿ ಗೀತಾಮೃತವನುಣಿಸು || ೩ ||