ವನವೆಲ್ಲಾ ಕಲ್ಪತರು, ಗಿಡವೆಲ್ಲಾ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವನವೆಲ್ಲಾ ಕಲ್ಪತರು
ಗಿಡವೆಲ್ಲಾ ಮರುಜವಣಿ
ಶಿಲೆಗಳೆಲ್ಲಾ ಪರುಷ
ನೆಲವೆಲ್ಲಾ ಅವಿಮುಕ್ತಿಕ್ಷೇತ್ರ. ಜಲವೆಲ್ಲಾ ನಿರ್ಜರಾಮೃತ
ಮೃಗವೆಲ್ಲಾ ಪುರುಷಾಮೃಗ
ಎಡಹುವ ಹರಳೆಲ್ಲಾ ಚಿಂತಾಮಣಿ. ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ
ನೋಡುತ್ತ ಬಂದು ಕದಳಿಯ ಬನವ ಕಂಡೆ ನಾನು.