ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ವಿಶ್ವಕರ್ಮ

ವಿಕಿಸೋರ್ಸ್ ಇಂದ
Jump to navigation Jump to search
ವಿಶ್ವಕರ್ಮ
ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನಾದ ಧರ್ಮ ಪ್ರಜಾಪತಿಯ ಎಂಟು ಮಕ್ಕಳಲ್ಲಿ ಪ್ರಭಾಸನೂ ಒಬ್ಬ. ಇವನ ಮಗನೇ ವಿಶ್ವಕರ್ಮ. ಬಾಲ್ಯದಲ್ಲೇ ಆತನಲ್ಲಿ ಹೊಸ ಆಲೋಚನೆಗಳು ಹರಳುಗಟ್ಟುತ್ತಿದ್ದವು. ಋುಷಿ ಮುನಿಗಳ ಪರ್ಣಕುಟೀರಗಳ್ನು ನೋಡಿದಾಗ ಮನಸ್ಸಿಗೆ ಬೇಸರವಾಗುತ್ತಿತ್ತು. ಮರದಡಿ ಅಥವಾ ಗುಹೆಗಳಲ್ಲಿ ವಾಸವಿದ್ದ ಜನರ ಕಂಡು ಯಾತನೆ. ಇಂಥವರಿಗೆ ಉತ್ತಮ ಮಹಲು, ನಗರಗಳನ್ನು ಕಟ್ಟುವ ಹಂಬಲ ಮನದಲ್ಲಿ ಗಟ್ಟಿಯಾಗುತ್ತಾ ಹೋಯಿತು.
ಬಾಲಕ ವಿಶ್ವಕರ್ಮರ ವಿದ್ಯಾಭ್ಯಾಸ ಗುರುಕುಲದಲ್ಲಿ ಮುಕ್ತಾಯವಾಯಿತು. ಗುರುದಕ್ಷಿಣೆಯಾಗಿ ಗುರು, ಅವರ ಪತ್ನಿ ಮತ್ತು ಪುತ್ರ-ಪುತ್ರಿ ಮಂಡಿಸಿದ ಬೇಡಿಕೆಗಳು ವಿಚಿತ್ರವಾಗಿದ್ದವು. 'ಮಳೆಗೆ ಸೋರದ, ಚಳಿಗಾಲದಲ್ಲೂ ಬೆಚ್ಚಗಿರುವ, ಬೇಸಿಗೆಯಲ್ಲಿ ತಂಪಾಗಿರುವ ಎಂದೂ ಹಳೆಯದಾಗದ ಕುಟೀರ'ವನ್ನು ಗುರು ಬಯಸಿದರು. ಬೇಕಾದಾಗ ಬಿಗಿ, ಬೇಡವಾದಾಗ ಸಡಿಲವಾಗುವ ರವಿಕೆ ಬೇಕೆಂದು ಗುರು ಪತ್ನಿ ಕೇಳಿದಳು. ಕಾಲಿಗೆ ಕೆಸರು ಮೆತ್ತದ ಹಾಗೂ ನೀರಿನಲ್ಲೂ ನಡೆಯಲಾಗುವಂಥ ಪಾದುಕೆಗಳನ್ನು ಗುರುಪುತ್ರ ಬಯಸುತ್ತಾನೆ. ತೊಳೆಯದಿದ್ದರೂ ಸ್ವಚ್ಛವಾಗಿ ಇರುವಂಥ ಅಡುಗೆ ಪಾತ್ರೆಗಳು ಮತ್ತು ಕೈಸುಡದಂತೆ ರುಚಿಯಾದ ಅಡುಗೆ ಮಾಡುವ ತಂತ್ರವನ್ನು ಗುರುಪುತ್ರಿ ಕೇಳುತ್ತಾಳೆ. ಗುರುಮನೆಯವರಿಗೆ ಮಾತುನೀಡಿದ ವಿಶ್ವಕರ್ಮ ಶಿವನ ತಪಸ್ಸು ಮಾಡಿ, ಇದೆಲ್ಲವನ್ನೂ ಸೃಷ್ಟಿಸುವ ಮಹಾನ್ ಶಕ್ತಿಯನ್ನು ಸಂಪಾದಿಸಿದರು ಎನ್ನುವ ಉಲ್ಲೇಖಗಳು ಪುರಾಣದಲ್ಲಿವೆ. ಗುರು ಪರಿವಾರದ ಅವಶ್ಯಕತೆ ತೀರಿಸುವುದಲ್ಲದೇ, ನಂತರ ಈ ಮಹಾಶಿಲ್ಪಿ ಮಾಡದ ವಸ್ತುವೇ ಇಲ್ಲ ಎನ್ನಬೇಕು. ಚಿನ್ನ, ಕಬ್ಬಿಣ, ಬೆಳ್ಳಿ, ತಾಮ್ರ ಮುಂತಾದ ಲೋಹಗಳಿಂದ ಅವರ ಸೃಷ್ಟಿಕಾರ್ಯ ಲೋಕಪ್ರಿಯವಾಗುತ್ತದೆ.
ಧರ್ಮಗಳ ಗಡಿ ದಾಟಿ ಅವರವರ ಭಕ್ತಿ-ಭಾವಕ್ಕೆ ತಕ್ಕಂತೆ ವಾಸ್ತುಶಿಲ್ಪವನ್ನು ವಿಶ್ವಕರ್ಮರು ರೂಪಿಸಿದ್ದಾರೆ. ಬೌದ್ಧ ಶೈಲಿಯ ವೈವಿಧ್ಯಮಯ ವಾಸ್ತು ಶಿಲ್ಪಗಳು, ಜೈನ ಧರ್ಮದ ಆಶಯದನುಸಾರ ರೂಪುಗೊಂಡ ಬಸದಿಗಳು ಮತ್ತು ಗೊಮ್ಮಟನ ವಿಗ್ರಹಗಳು ಅವರ ಕುಶಲತೆಗೆ ಸಾಕ್ಷಿಗಳು. ಹಿಂದೂ ದೇಗುಲಗಳ ನಿರ್ಮಾಣ ಮತ್ತು ದೇವತಾ ವಿಗ್ರಹಗಳ ಕೆತ್ತನೆ ಮೂಲಕ ಭಕ್ತ ಮತ್ತು ಭಗವಂತನ ಅನುಸಂಧಾನಕ್ಕೆ ಇವರು ಕಾರಣೀಕರ್ತರು. ಇತಿಹಾಸದುದ್ದಕ್ಕೂ ವಿಶ್ವಕರ್ಮರು ತಮ್ಮ ಕುರುಹುಗಳನ್ನು ಕಲಾಕೃತಿ, ಕೆತ್ತನೆಯ ವಾಸ್ತುಶಿಲ್ಪಗಳ ಮೂಲಕ ತೆರೆದಿಡುತ್ತಲೇ ಬಂದಿದ್ದಾರೆ. ಭಾರತದ ವೈಜ್ಞಾನಿಕ ವಾಸ್ತು ಶಿಲ್ಪಕಲೆಗೆ ಇವರದು ದೊಡ್ಡ ಕಾಣಿಕೆ.
ಮಣ್ಣು, ಮರ, ಕಲ್ಲು, ಲೋಹಗಳನ್ನು ಬಳಸಿ ಸಾಧನ-ಸಲಕರಣೆ ಅಥವಾ ಶಿಲ್ಪಗಳನ್ನು ಸೃಷ್ಟಿಸುವ ಕರಕೌಶಲವುಳ್ಳವರೆಲ್ಲ ವಿಶ್ವಕರ್ಮರೇ ಆಗಿದ್ದಾರೆ. ಮರದ ಕೊರಡು ಇವರ ಕೈಯಲ್ಲಿ ಕಲೆಯಾಗುತ್ತದೆ. ಕಲ್ಲು ಶಿಲೆಯಾಗಿ ಅರಳುತ್ತದೆ. ಲೋಹವು ಚೆಂದದ ಆಭರಣವಾಗಿ ಕೊರಳು, ಕಿವಿ, ಮೂಗಿನ ಮೇಲೆ ಕುಳಿತು ಕಣ್ ಕುಕ್ಕುತ್ತದೆ.

ವಿಶ್ವಕರ್ಮರಿಂದ ವೈವಿಧ್ಯಗಳ ಸೃಷ್ಟಿ

1. ಅಳಿಯ ಸೂರ್ಯನಿಗೆ ಚಕ್ರದ ಕೊಡುಗೆ: ಹನ್ನೆರಡು ತಿಂಗಳ ಕಾಲಚಕ್ರವು ವಿಶ್ವಕರ್ಮರ ಸೃಷ್ಟಿಯೆಂದು ಹೇಳಲಾಗುತ್ತದೆ. ವಿಶ್ವಕರ್ಮರ ಪುತ್ರಿ ಸಂಜ್ಞಾದೇವಿಯನ್ನು ಸೂರ್ಯ ವರಿಸುತ್ತಾನೆ. ಆದರೆ, ಆತನ ಪ್ರಖರ ಕಿರಣಗಳ ತಾಪದಿಂದ ಸಂಜ್ಞಾದೇವಿ ತತ್ತರಿಸುತ್ತಾಳೆ. ಅಳಿಯ-ಮಗಳ ಸಮಸ್ಯೆ ತೀರಿಸಲು 12 ತಿಂಗಳ ಚಕ್ರವನ್ನು ವಿಶ್ವಕರ್ಮ ಸೃಷ್ಟಿಸಿದರು. ಹೀಗಾಗಿ ವರ್ಷದ ಕೆಲವು ತಿಂಗಳು ತಾಪ ಕಡಿಮೆಯಾಗಿ ಸತಿ-ಪತಿ ಸೇರುವಂತಾಗುತ್ತದೆ. ಇವರ ಸಂತಾನವೇ ಅಶ್ವಿನಿ ದೇವತೆಗಳು.
2. ಲಂಕೆ, ದ್ವಾರಕೆ, ಇಂದ್ರಪ್ರಸ್ತ...: ಕುಬೇರನಿಗಾಗಿ ಲಂಕಾನಗರವನ್ನು ಸೃಷ್ಟಿಸಿದರು. ಅವರ ಕೈಚಳಕದಿಂದಾಗಿ ಕಣ್ಣಿಗೆ ಹಬ್ಬವಾಗುವಂತೆ ಲಂಕೆಯ ವೈಭವ ಮೂರುಲೋಕದಲ್ಲೂ ಪ್ರಸಿದ್ಧವಾಗಿತ್ತು. ಎಲ್ಲೆಲ್ಲೂ ಚಿನ್ನವೇ ಚಿನ್ನ. ಆದಿಶೇಷನಿಗಾಗಿ ಭೋಗವತಿ ನಗರ, ಶ್ರೀಕೃಷ್ಣನಿಗಾಗಿ ದ್ವಾರಕಾ ನಗರ, ಪಾಂಡವರಿಗಾಗಿ ಯಮುನಾನದಿ ಸಮೀಪದಲ್ಲಿ ಇಂದ್ರಪ್ರಸ್ಥವನ್ನು ಸೃಷ್ಟಿಸಿದರು. ಇಂದ್ರನ ಅಮರಾವತಿಯ ವೈಭವ ಇಂದ್ರಪ್ರಸ್ತಕ್ಕಿತ್ತು. ಯಮನ ಪಾಪ-ಪುಣ್ಯಗಳ ವಿಚಾರಣೆಗಾಗಿ ಸಭಾಮಂದಿರವನ್ನೂ ವಿಶ್ವಕರ್ಮ ಕಟ್ಟಿಕೊಟ್ಟರು.
3. ದೇವತೆಗಳಿಗೆ ಅಸ್ತ್ರ ಪ್ರದಾನ: ಶಿವ, ವಿಷ್ಣು, ಇಂದ್ರ ಮತ್ತಿತರ ದೇವರುಗಳಿಗೆ ಅಸ್ತ್ರ ಹಾಗೂ ರಥಗಳನ್ನು ಮಾಡಿಕೊಟ್ಟು, ದುಷ್ಟ ರಕ್ಕಸರ ವಧೆಗೆ ಕಾರಣನಾದ ವಿಶ್ವಕರ್ಮರ ಕೊಡುಗೆ ವಿವರಿಸುವ ಸಾಕಷ್ಟು ಕತೆಗಳಿವೆ. ವೃತ್ರನೆಂಬ ದುಷ್ಟ ರಾಕ್ಷ ಸನ ವಧೆಗಾಗಿ ದೇವೇಂದ್ರನಿಗೆ ದಧೀಚಿ ಎಂಬ ಋುಷಿಯ ಬೆನ್ನೆಲುಬಿನಿಂದ ವಜ್ರಾಯುಧವನ್ನು ವಿಶ್ವಕರ್ಮ ತಯಾರಿಸಿದರು. ನೂರು ಗಂಟುಗಳುಳ್ಳ, ಉಕ್ಕಿಗಿಂತಲೂ ಗಟ್ಟಿಯಾದ ವಜ್ರಾಯುಧಕ್ಕೆ ಎಣೆಯೇ ಇರಲಿಲ್ಲ.
4. ನಗರದಷ್ಟು ವಿಶಾಲವಾದ ಪುಷ್ಪಕ ವಿಮಾನ: ವಿಶ್ವಕರ್ಮರು ಸೃಷ್ಟಿಸಿದ ಪುಷ್ಪಕ ವಿಮಾನವೇ ಇಂದಿನ ವಿಮಾನ ಸೃಷ್ಟಿಗೆ ಪ್ರೇರಣೆ ಎನ್ನುವ ವಾದಗಳಿವೆ. ತನ್ನ ಅಜ್ಜ ಬ್ರಹ್ಮನಿಗಾಗಿ ಇದನ್ನವರು ಸೃಷ್ಟಿಸಿದ್ದರಂತೆ. ತಪಸ್ಸು ಮಾಡಿ ಅದನ್ನು ಕುಬೇರ ಪಡೆದುಕೊಂಡ. ನಂತರ ಅದು, ರಾವಣನ ಪಾಲಾಯಿತು. ದೇವತೆಗಳಿಗೆ, ಯಕ್ಷ , ಗಂಧರ್ವರಿಗೂ ನಾನಾ ವಿಮಾನಗಳನ್ನು ವಿಶ್ವಕರ್ಮ ಸೃಷ್ಟಿಸಿಕೊಟ್ಟಿದ್ದ. ಎಷ್ಟು ಸಾವಿರ ಜನ ಕುಳಿತರೂ ಹಿಗ್ಗಬಲ್ಲ, ಆಕಾಶದಲ್ಲೇ ನಿಲ್ಲಿಸುವ, ಕೋರಿದ ಜಾಗಕ್ಕೆ ಕರೆದೊಯ್ಯುವ ಸಾಮರ್ಥ್ಯ ಅದರದು.
5. ಕೃಷ್ಣಾರ್ಜುನರಿಗೆ ರಥ-ಅಸ್ತ್ರ: ಖಾಂಡವ ವನವನ್ನು ಆಹಾರವಾಗಿ ಬಯಸಿದ ಅಗ್ನಿದೇವನಿಗೆ ಕೃಷ್ಣಾರ್ಜುನರು ನೆರವಾದರು. ಈ ಸಮಯದಲ್ಲಿ ರಥ, ಗಾಂಡೀವ ಎಂಬ ಬಿಲ್ಲು ಮತ್ತು ಎಂದೂ ಖಾಲಿಯಾಗದ ಬತ್ತಳಿಕೆಯನ್ನು ಅರ್ಜುನ, ಚಕ್ರಾಯುಧ ಮತ್ತು ಕೌಮೋದಕಿ ಎಂಬ ಗದೆಯನ್ನು ಶ್ರೀಕೃಷ್ಣ ಪಡೆದರು. ಈ ಅಸ್ತ್ರಗಳು ಮತ್ತು ರಥವು ವಿಶ್ವಕರ್ಮರ ಸೃಷ

ಈ ವರ್ಗದಲ್ಲಿ ಸದ್ಯದಲ್ಲಿ ಯಾವುದೇ ಪುಟಗಳಾಗಲಿ ಅಥವ ಚಿತ್ರಗಳಾಗಲಿ ಇಲ್ಲ.