ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷೆ*ಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವರ್ಣವಿಲ್ಲದ
ಲಿಂಗಕ್ಕೆ
ರೂಪಪ್ರತಿಷೆ*ಯ
ಮಾಡುವರು.
ಪ್ರಳಯವಿಲ್ಲದ
ಲಿಂಗಕ್ಕೆ
ಪ್ರಾಣಪ್ರತಿಷೆ*ಯ
ಮಾಡುವರು.
ನುಡಿಯಬಾರದ
ಲಿಂಗಕ್ಕೆ
ಜಪಸ್ತೋತ್ರ
ಪೂಜೆಯ
ಮಾಡುವರು.
ಮುಟ್ಟಬಾರದ
ಲಿಂಗಕ್ಕೆ
ಕೊಟ್ಟು
ಕೊಂಡಾಡಿಹೆವೆಂಬರು.
ಬೊಟ್ಟಿಡಲು
ಎಡೆಯಿಲ್ಲದ
ಲಿಂಗವ
ಮುಟ್ಟಿ
ಪೂಜಿಸಿಹೆವೆಂಬ
ಭ್ರಷ್ಟರ
ನೋಡಾ
ಗುಹೇಶ್ವರಾ.