ವಸ್ತುವೆಂದರೆ ಪರಬ್ರಹ್ಮನಾಮ. ಆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಸ್ತುವೆಂದರೆ ಪರಬ್ರಹ್ಮನಾಮ. ಆ ವಸ್ತು ತನ್ನಿಂದ ಭಾವವ ಕಲ್ಪಿಸಿ
ಆ ಭಾವದಿಂದ ಮಾಯವ ಕಲ್ಪಿಸಿ
ಆ ಮಾಯದಿಂದ ಮೋಹವ ಕಲ್ಪಿಸಿ
ಆ ಮೋಹದಿಂದ ಸಕಲ ಪ್ರಪಂಚುವ ಹುಟ್ಟಿಸಿ
ಆ ಪ್ರಪಂಚಿನಿಂದ ಸಮಸ್ತ ಜಗತ್ತು ಹುಟ್ಟಿತ್ತು ನೋಡಾ. ಇಂತಿವೆಲ್ಲವು ನೀನಾಗೆಂದಡಾದವು; ನೀ ಬೇಡಾಯೆಂದಡೆ ಮಾದವು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.