ವಾಗಾದಿ ಕರ್ಮೇಂದ್ರಿಯಂಗಳು ಇವಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾಗಾದಿ ಕರ್ಮೇಂದ್ರಿಯಂಗಳು ಇವಕ್ಕೆ ವಿವರ: ವಾಕು:ನುಡಿವುದು
ಪಾಣಿ:ಮಾಡುವುದು ಪಾದ:ನಡೆವುದು
ಪಾಯು:ಸರ್ವಾಂಗದಲ್ಲಿ ಕೂಡುವುದು. ಗುಹ್ಯ:ಸೇರಿಸುವುದು. ಇಂತೀ ಪಂಚಕರ್ಮೇಂದ್ರಿಯಂಗಳಲ್ಲಿ ಚರಿಸದೆ ಸುಚಾರಿತ್ರದಲ್ಲಿ ನಡೆಯಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.