ವಾಚಾತೀತ, ಮನೋತೀತ ಅಗೋಚರ

ವಿಕಿಸೋರ್ಸ್ದಿಂದ



Pages   (key to Page Status)   


ವಾಚಾತೀತ
ಮನೋತೀತ ಅಗೋಚರ ನಿರ್ನಾಮ ನಿರ್ಗುಣ ನಿತ್ಯ ನಿರಂಜನ ನಿರವಯ ನಿರಾಮಯ ನಿರ್ಮಲ ನಿಃಕಲ ಜ್ಞಾನನಿರ್ಭೇದ್ಯ ನಿರುಪಾಧಿಕ ನಿರವಸ್ಥ ನಿರಾವರಣ ಅದ್ವೆ ೈತಾನಂದ ಸಂಪೂರ್ಣವನ್ನುಳ್ಳ ಪರಶಿವ
ತಾನೆ ಪರಮೇಶ್ವರನಾದನು. ಆ ಪರಮೇಶ್ವರನಿಂದ ಸದಾಶಿವನಾದನು. ಸದಾಶಿವನಿಂದ ಈಶ್ವರನಾದನು. ಈಶ್ವರನಿಂದ ಮಹೇಶ್ವರನಾದನು. ಮಹೇಶ್ವರನಿಂದ ರುದ್ರನಾದನು. ರುದ್ರನಿಂದ ವಿಷ್ಣು ಹುಟ್ಟಿದನು. ವಿಷ್ಣುವಿನಿಂದ ಬ್ರಹ್ಮ ಹುಟ್ಟಿದನು. ಬ್ರಹ್ಮನಿಂದ ಸಕಲ ಜಗತ್ತೆಲ್ಲಾ ಆಯಿತು. ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ; ಸ್ವಾಧಿಷಾ*ನಚಕ್ರಕ್ಕೆ ವಿಷ್ಣುವಧಿದೇವತೆ; ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ; ಅನಾಹತಚಕ್ರಕ್ಕೆ ಈಶ್ವರನಧೀದೇವತೆ ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ; ಆಜ್ಞಾಚಕ್ರಕ್ಕೆ ಪರಮೇಶ್ವರನಧಿದೇವತೆ. ಆಧಾರಸ್ಥಾನದ ಬ್ರಹ್ಮತತ್ವಕ್ಕೆ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷಾ*ನದ ವಿಷ್ಣುತತ್ವಕ್ಕೆ ಗುರುಲಿಂಗವ ಸ್ವಾಯತವ ಮಾಡಿ ಮಣಿಪೂರಕಸ್ಥಾನದ ರುದ್ರತತ್ವಕ್ಕೆ ಶಿವಲಿಂಗವ ಸ್ವಾಯತವ ಮಾಡಿ ಅನಾಹತಸ್ಥಾನದ ಈಶ್ವರತತ್ವಕ್ಕೆ ಜಂಗಮಲಿಂಗವ ಸ್ವಾಯತವ ಮಾಡಿ ವಿಶುದ್ಧಿಸ್ಥಾನದ ಸದಾಶಿವತತ್ವಕ್ಕೆ ಪ್ರಸಾದಲಿಂಗವ ಸ್ವಾಯತವ ಮಾಡಿ ಆಜ್ಞಾಸ್ಥಾನದ ಪರಮೇಶ್ವರನೆಂಬ ತತ್ವಕ್ಕೆ ಮಹಾಲಿಂಗವ ಸ್ವಾಯತವ ಮಾಡಿ ಪರಿಪೂರ್ಣಲಿಂಗವು ತಾನೆ ಸರ್ವಾಂಗದಲ್ಲಿ ಸ್ವಾಯತವಾಗಲು
ಆ ಶರಣನ ಸರ್ವಾಂಗವು ನಿರುಪಮ ಲಿಂಗಸ್ವಾಯತವಾಗಿ ನಿರವಯಸ್ಥಲ ವೇದ್ಯವಾಯಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.