ವಾಚ್ಯಾವಾಚ್ಯಂಗಳಿಲ್ಲದಂದು, ಪಕ್ಷಾಪಕ್ಷಗಳಿಲ್ಲದಂದು, ಸಾಕ್ಷಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾಚ್ಯಾವಾಚ್ಯಂಗಳಿಲ್ಲದಂದು
ಪಕ್ಷಾಪಕ್ಷಗಳಿಲ್ಲದಂದು
ಸಾಕ್ಷಿ
ಸಭೆಗಳಿಲ್ಲದಂದು
ಪೃಥ್ವಿ ಆಕಾಶಾದಿಗಳಿಲ್ಲದಂದು
ಉತ್ಪತ್ತಿ
ಸ್ಥಿತಿ
ಲಯಂಗಳಿಲ್ಲದಂದು
ಸತ್ವ
ರಜ
ತಮಗಳೆಂಬ ಗುಣತ್ರಯಂಗಳಿಲ್ಲದಂದು
ಅಹಂಕಾರ ಮಮಕಾರ ಪ್ರಕೃತಿ ಮಹತ್ತು
ಮಾಯಾಪ್ರಪಂಚು ಮೊಳೆದೋರದಂದು
ಮಾಯಿಕ ನಿರ್ಮಾಯಿಕಂಗಳು ಹುಟ್ಟದಂದು
ಜ್ಞಾನಾಜ್ಞಾನಗಳು ಉದಯವಾಗದಂದು
ರೂಪು ನಿರೂಪು ಹುಟ್ಟದಂದು
ಕಾಮ ನಿಃಕಾಮಂಗಳಿಲ್ಲದಂದು
ಮಾಯಾಮಾಯಂಗಳೇನುಯೇನೂಯಿಲ್ಲದಂದು
ನಿನ್ನ ನಿರ್ಮಾಯನೆಂದು ಹೆಸರಿಟ್ಟು ಹೇಳುವರಾರೂಯಿಲ್ಲದಂದು
ನಿಜವು ನಿನ್ನಯ ಘನತೆಯ ನೀನರಿಯದೆ
ಇದಿರನು ಅರಿಯದೆ
ಏನನು ಅರಿಯದೆ
ನೀನೆ ನೀನಾಗಿರ್ದೆಯಲ್ಲಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.