ವಾರವೇಳು, ಜಾತಿ ಹದಿನೆಂಟೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವಾರವೇಳು
ಜಾತಿ ಹದಿನೆಂಟೆಂದು ನುಡಿವ ಪಾತಕರ ನುಡಿಯ ಕೇಳಲಾಗದು ಅದೆಂತೆಂದಡೆ: ವಾರವೆರಡು
ಜಾತಿಯೆರಡು
ಭವಿಯೊಂದು ಕುಲ
ಭಕ್ತನೊಂದು ಕುಲ. ಇಂತೀ ಎಂಬತ್ತು ನಾಲ್ಕು ಲಕ್ಷ ಜೀವಕ್ಕೆ ಜೀವನವೇ ಆಹಾರ. ಜೀವ ತಪ್ಪಿಸಿ ಜೀವಿಸಬಾರದು. `ಯಥಾ ಮಂತ್ರ ತಥಾ ಸಿದ್ಧಿ'ಯೆಂದು ಲಿಂಗಕ್ಕರ್ಪಿತವ ಮಾಡಿಕೊಂಬುದೆ ಶುದ್ಧ
ಉಳಿದಾದುದೆಲ್ಲ ಜೀವನ್ಮಯ ಗುಹೇಶ್ವರ.