ವಾಸನೆಯ ಕೊಂಬುದು ಲಿಂಗದ ನಾಸಿಕ; ರುಚಿಸುವದು ಲಿಂಗದ ಜಿಹ್ವೆ; ನೋಡುವದು ಲಿಂಗದ ನೇತ್ರ; ಕೇಳುವದು ಲಿಂಗದ ಶ್ರೋತ್ರ; ಸೋಂಕುವದು ಲಿಂಗ ತ್ವಕ್ಕು; ನಡೆವುದು ಲಿಂಗ ತಾನೆ. ನುಡಿವುದು ಲಿಂಗ ತಾನೆ. ಮನಬೆರಸಿ ಪರಿಣಾಮಿಸುವುದು ಲಿಂಗ ತಾನೆಯೆಂಬ ಭಾವ ಸಹಭಾಜನವೆಂದೆನಿಸಿಕೊಂಡಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.