ವಿಕಿಸೋರ್ಸ್:ಯೋಜನೆ/ಎಸ್. ಸುಕುಮಾರ ಗೌಡ

ವಿಕಿಸೋರ್ಸ್ದಿಂದ


ಡಾ. ಎಸ್. ಸುಕುಮಾರ ಗೌಡ ಇವರು ೧೯೬೦ರ ಆರಂಭದಲ್ಲಿ ಹೈಸ್ಕೂಲ್ ಅಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಜೀವನವನ್ನು ಆರಂಭಿಸಿದರು. ಬಳಿಕ ಅವರು ಉಡುಪಿಯ ಅಂದಿನ ಮಣಿಪಾಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆರು ವರ್ಷಗಳ ಕಾಲ, ಅಂದರೆ-೧೯೫೭ರಲ್ಲಿ ಕೆನಡಾಕ್ಕೆ ಉನ್ನತ ಶಿಕ್ಷಣಕ್ಕಾಗಿ ಹೋಗುವ ತನಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಕೆನಡಾದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉಚ್ಛಶಿಕ್ಷಣ ಪಡೆಯುತ್ತಾ, ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಎಂ.ಎಡ್.,ಪಿ.ಎಚ್.ಡಿ. ಪದವಿ ಗಳಿಸಿ, ಪೋಸ್ಟ್ ಡಾಕ್ಟರಲ್ ಮುಗಿಸಿದರು. ಕೆನಡಾ, ಅಮೆರಿಕಾಗಳ ಹಲವು ಶೈಕ್ಷಣಿಕ ಪತ್ರಿಕೆಗಳಲ್ಲಿ ಭಾಷಾ ಶಿಕ್ಷಣದ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಲವು ಬಾರಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಸದ್ಯ ಡಾ. ಎಸ್. ಸುಕುಮಾರ ಗೌಡ ಸ್ಪಸ್ಥಾನವಾದ ಪುತ್ತೂರಿನಲ್ಲಿ ಶಿಕ್ಷಣ ಅಧ್ಯಯನ ಕೇಂದ್ರ ಹಾಗೂ 'ಮಕ್ಕಳ ಮಂಟಪ'ವೆಂಬ ತಮ್ಮದೇ ಆದ ಸಂಸ್ಧೆಯಲ್ಲಿ ಶೈಕ್ಷಣಿಕ ಅಧ್ಯಯನದ ಸಲಹೆ ಮತ್ತು ಗ್ರಂಥ ರಚನೆಯಲ್ಲಿ ನಿರತರಾಗಿದ್ದಾರೆ.


  1. ಮಗು ಮನೆಯಿಂದ ಶಾಲೆಗೆ
  2. ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
  3. ಗುಣಶೋಧ