ವಿರಕ್ತಿಯೇ ಅವಿರಕ್ತಿ ವಿರಕ್ತನೆನ್ನದಿರಣ್ಣಾ. ನೋಟದ ಕರುಳ ಕೊಯ್ಯದನ್ನಕ್ಕರ ಕ್ರೀಯದ ಕರಬೋನಗಳೊಡೆಯದನ್ನಕ್ಕರ ಅಷ್ಟಮದಾದಿಗಳೆಂಬವ ಹೊಟ್ಟುಹುರಿಯದನ್ನಕ್ಕರ ಬೇಕುಬೇಡಾಯೆಂದು ಪರಿವ ಸರ್ವಸಂದೇಹವ ಹೂಳದನ್ನಕ್ಕರ ವಿರಕ್ತ ವಿರಕ್ತನೆನ್ನದಿರಣ್ಣಾ. ಶ್ರೀಶೈಲಚೆನ್ನಮಲ್ಲಿಕಾರ್ಜುನದೇವನೊಬ್ಬನೆ ವಿರಕ್ತ ಕಾಣಿರಣ್ಣಾ.