Library-logo-blue-outline.png
View-refresh.svg
Transclusion_Status_Detection_Tool

ವಿಶ್ವವೆಲ್ಲವೂ ಮಾಯೆಯ ವಶವಾಗಿ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವಿಶ್ವವೆಲ್ಲವೂ ಮಾಯೆಯ ವಶವಾಗಿ
ವಿಶ್ವದೊಳಗಾದ ದ್ರವ್ಯವ ಮಾಯೋಚ್ಛಿಷ್ಟವೆಂದು ಶಿವನೊಲ್ಲ. ಅಂತಪ್ಪ ಮಾಯೆಯ ಗೆಲಿದು
ಮಾಯಾತೀತರಾದ ಭಕ್ತರಿಂದೊದಗಿದ ಪ್ರಸಾದ
ಮಾಯಾತೀತನಾದ ಶಿವಂಗೆ ಮಹಾನೈವೇದ್ಯ
ಪರಮತೃಪ್ತಿ ಎಂಬುದ ನಾ ಬಲ್ಲೆನಯ್ಯಾ. ಅದೆಂತೆಂದಡೆ: ಮಾಯೋಚ್ಛಿಷ್ಟಂ ಜಗತ್ಸರ್ವಂ ಶುದ್ಧಂ ಪಂಚಾಕ್ಷರೇಣ ಚ ಅಭಿಮಂತ್ರ್ಯ ತದುಚ್ಛಿಷ್ಟಂ ಪದಾರ್ಥಂ ಭಕ್ತಿಮಾನ್ನರಃ ಚರಲಿಂಗೇ ವಿಚಾರೇಣ ಸಮರ್ಪ್ಯ ತದನಂತರಂ ಸ್ವಲಿಂಗೇ ಚ ಪ್ರಸಾದಾನ್ನಂ ದತ್ವಾ ಭೋಜನಮಾಚರೇತ್ ಎಂದುದಾಗಿ ಚೆನ್ನಯ್ಯನುಂಡು ಮಿಕ್ಕುದ ಚಪ್ಪರಿದು ಸವಿದ
ಚೋಳಿಯಕ್ಕನೊಕ್ಕುದ ಕೊಂಡ. ಇದು ಕಾರಣ_ ನಿಮ್ಮ ಪರಮಕಲಾರೂಪವಾದ ಜಂಗಮದ ಪ್ರಸಾದವ ನಿಮಗೆ ದಣಿಯಿತ್ತು ನಿಮ್ಮ ಪ್ರಸಾದವೆಂಬ ಜ್ಯೋತಿ ಎನ್ನಂಗ_ಪ್ರಾಣ_ಭಾವ_ಜ್ಞಾನ ಹಿಂಗದೆ ಬೆಳಗುತ್ತಿದೆ
ನೋಡಾ ಕೂಡಲಚೆನ್ನಸಂಗಮದೇವಾ