Library-logo-blue-outline.png
View-refresh.svg
Transclusion_Status_Detection_Tool

ವೃಷಭನ ಹಿಂದೆ ಪಶುವಾನು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವೃಷಭನ ಹಿಂದೆ ಪಶುವಾನು ಬಂದೆನು ; ನಂಬಿ ನಚ್ಚಿ ಪಶುವಾನುಬಂದೆನು. ಸಾಕಿ ಸಲಹಿಹನೆಂದು ಸಲೆ ನಚ್ಚಿ ಬಂದೆನು. ಒಲಿದಹ ಒಲಿದಹನೆಂದು ಬಳಿಯಲ್ಲಿ ಬಂದೆನು. ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ನಂಬಿ ಬಂದ ಹೆಂಗೂಸ ಹಿಂದೊಬ್ಬರೆಳದೊಯ್ದರೆ ಎಂತು ಸೈರಿಸಿದೆ ಹೇಳಾ
ಎನ್ನ ದೇವರದೇವಾ ?