ವೇದಪ್ರಿಯನೆಂಬೆನೆ ನಮ್ಮ ದೇವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವೇದಪ್ರಿಯನೆಂಬೆನೆ ನಮ್ಮ ದೇವ ? ವೇದಪ್ರಿಯನಲ್ಲ. ನಾದಪ್ರಿಯನೆಂಬೆನೆ ನಮ್ಮ ದೇವ ? ನಾದಪ್ರಿಯನಲ್ಲ. ಭೋಗಪ್ರಿಯನೆಂಬೆನೆ ನಮ್ಮ ದೇವ ? ಭೋಗಪ್ರಿಯನಲ್ಲ. ತುತ್ತುಪ್ರಿಯನೆಂಬೆನೆ ನಮ್ಮ ದೇವ ? ತುತ್ತುಪ್ರಿಯನಲ್ಲ. ಮನದ ಭಕ್ತಿಪ್ರಿಯ ಕಾಣಾ
ಕೂಡಲಚೆನ್ನಸಂಗಮದೇವಾ