Library-logo-blue-outline.png
View-refresh.svg
Transclusion_Status_Detection_Tool

ವೇದವೇದಾರ್ಥಸಾರಾಯದಿಂದ ಆರುಶಾಸ್ತ್ರ ಹದಿನೆಂಟು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ವೇದವೇದಾರ್ಥಸಾರಾಯದಿಂದ ಆರುಶಾಸ್ತ್ರ ಹದಿನೆಂಟು ಪುರಾಣಂಗಳಾದವು. ಆ ಪುರಾಣಂಗಳನರಿವುದರಿಂದೆ ಜ್ಯೋತಿಜ್ರ್ಞಾನವಾಯಿತ್ತು. ಆ ಜ್ಯೋತಿಜ್ರ್ಞಾನದಿಂದೆ; _ಮತಿಜ್ಞಾನ
ಶ್ರುತಜ್ಞಾನ
ಮನಪರಿಪೂರ್ಣಜ್ಞಾನ
ಅವಧಿಜ್ಞಾನ ಕೇವಲಜ್ಞಾನ. _ಇಂತೀ ಪಂಚಜ್ಞಾನವೆ ಪಂಚಸ್ಥಲವಾಯಿತ್ತು. ಮತಿಜ್ಞಾನವುಳ್ಳಾತನೆ ಭಕ್ತ
ಶ್ರುತಜ್ಞಾನವುಳ್ಳಾತನೆ ಮಹೇಶ್ವರ
ಮನಪರಿಪೂರ್ಣ ಜ್ಞಾನವುಳ್ಳಾತನೆ ಪ್ರಸಾದಿ
ಅವಧಿಜ್ಞಾನವುಳ್ಳಾತನೆ ಪ್ರಾಣಲಿಂಗಿ
ಕೇವಲಜ್ಞಾನವುಳ್ಳಾತನೆ ಶರಣ
ಶರಣಸ್ಥಲವೆಂಬುದು ಭವಂ ನಾಸ್ತಿ. ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿಜ್ರ್ಞಾನವೆ ಪಂಚಸ್ಥಲದಲ್ಲಿ ಏಕಾಕಾರವಾದ ಐಕ್ಯನು_ ಇಂತೆಂದುದಾಗಿ ಕೂಡಲಚೆನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು