ವಿಷಯಕ್ಕೆ ಹೋಗು

ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವೂ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವೂ ಐವತ್ತೆರಡಕ್ಷರದೊಳಗು ಐವತ್ತೆರಡಕ್ಷರಂಗಳೆಲ್ಲವು ಒಂದು ಜಿಹ್ವೆಯೊಳಗು. ಆ ಜಿಹ್ವೆ ಮನದೊಳಗು
ಆ ಮನ ಪ್ರಾಣದೊಳಗು. ಆ ಪ್ರಾಣ ನಾದದೊಳಗು
ಆ ನಾದ ಬ್ರಹ್ಮದೊಳಗು. ಆ ನಾದಬ್ರಹ್ಮದ ಸಂಚವ ತಿಳಿದೊಡೆ
ಗುಹೇಶ್ವರಲಿಂಗವು ತಾನೆ.