ವೇದ ಘನವೆಂಬೆನೆ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ವೇದ ಘನವೆಂಬೆನೆ ? ವೇದ ವೇಧಿಸಲರಿಯದೆ ಕೆಟ್ಟವು. ಶಾಸ್ತ್ರ ಘನವೆಂಬೆನೆ ? ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು. ಪುರಾಣ ಘನವೆಂಬೆನೆ ? ಪುರಾಣ ಪೂರೈಸಲರಿಯದೆ ಕೆಟ್ಟವು. ಆಗಮ ಘನವೆಂಬೆನೆ ? ಆಗಮ ಅರಸಲರಿಯದೆ ಕೆಟ್ಟವು. ಅದೇನು ಕಾರಣವೆಂದಡೆ: ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ
ತಮ್ಮ ತನುವಿಡಿದು ಅರಸಲರಿಯವು. ಇದಿರಿಟ್ಟುಕೊಂಡು ಕಡೆಹೋದ
ನರಲೋಕದ ನರರುಗಳರಿಯರು
ಸುರಲೋಕದ ಸುರರುಗಳರಿಯರು
ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ.