ಶಂಕಿನಿನಾಡಿಯ ಸಪುರನಾಳದೊಳಗಣ ಸಣ್ಣ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಂಕಿನಿನಾಡಿಯ ಸಪುರನಾಳದೊಳಗಣ ಸಣ್ಣ ಬಣ್ಣದ ಹೊಲಬ ಅಣ್ಣಗಳೆತ್ತ ಬಲ್ಲರು ? ಲಿಂಗದ ಹಂಗಿನ ಪ್ರಾಣ
ಪ್ರಾಣದ ಹಂಗಿನ ದೇಹ
ದೇಹದ ಹಂಗಿನ ಲಿಂಗವ
ಲಿಂಗವೆಂದು ಪೂಜಿಸಲು;_ ಆಳಿನಾಳಿನ ಕೀಳಾಳು ಪಟ್ಟಕ್ಕೆ ಸಲುವನೆ ? ಗುಹೇಶ್ವರನೆಂಬ ಸಹಜದ ನಿಲವು ಸಂತೆಯ ಪಸರಕ್ಕೆ ಬಂದಡೆ ನಾಚಿತ್ತೆನ್ನ ಮನವು !