ಶರಣನಾದಡೆ ಶರಣನಾದಡೆ ಮುರಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರಣನಾದಡೆ ಮುರಿದ ಬಂಗಾರವ ಬೆಳಗಾರದಲ್ಲಿ ಬೆಚ್ಚಂತಿರಬೇಕು ಲಿಂಗದಲ್ಲಿ
ಶರಣನಾದಡೆ ಶುಭ್ರವಸ್ತ್ರಕ್ಕೆ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ. ಶರಣನಾದಡೆ ಕರಕುಕಟ್ಟಿರದ ಲೋಹದ ಪುತ್ಥಳಿಯಂತಿರಬೇಕು ಲಿಂಗದಲ್ಲಿ. ಇಂತೀ ಸಮರಸಭಾವವನರಿಯದೆ ಹುಸಿಹುಂಡನಂತೆ ವೇಷವ ಧರಿಸಿ ಗ್ರಾಸಕ್ಕೆ ತಿರುಗುವ ವೇಷಗಳ್ಳರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.