Library-logo-blue-outline.png
View-refresh.svg
Transclusion_Status_Detection_Tool

ಶರಣಭರಿತ ಶಿವನು ಶಿವನು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಶರಣಭರಿತ ಶಿವನು ಶಿವಭರಿತ ಶರಣನೆಂಬುದು ನಿಜವಲ್ಲದೆ
ಜಗಭರಿತ ಶಿವನು ಶಿವಭರಿತ ಜಗವೆಂಬುದು ಹುಸಿ ನೋಡಾ ! ಅದೇನು ಕಾರಣವೆಂದೊಡೆ : ಜಗಕ್ಕೆ ಪ್ರಳಯ ಮಹಾಪ್ರಳಯಂಗಳುಂಟು. ಇದು ಕಾರಣ
ಪ್ರಳಯಾತೀತ ಶರಣಸನ್ನಿಹಿತ ನಮ್ಮ ಅಖಂಡೇಶ್ವರ.