ಶರಣ ಸತ್ತರೆ ಭಕ್ತರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರಣ ಸತ್ತರೆ ಭಕ್ತರು ಹೊತ್ತರು
ಪ್ರಸಾದಿಗಳತ್ತರಲ್ಲಾ
ಸುತ್ತಲಿದ್ದ ಜಂಗಮವೆಲ್ಲಾ ಕಿಚ್ಚ ಹಿಡಿದರಲ್ಲಾ
ಊರೊಳಗಿದ್ದವರು ಒಂಬತ್ತು ಬಾಗಿಲ ತುಂಬಿಕೊಂಡಿದ್ದರು ನೋಡಾ ! ಮರಳಿ ಒಂದು ಬಾಗಿಲ ತೆಗೆದು
ಸತ್ತುದ ಕಂಡು
ಅದಾರು ಅದಾರು ಸತ್ತರೆಂದು
ಸತ್ತವರು ಬಹುದ ಕಂಡು ಇತ್ತಲೆಯಾದರಲ್ಲಾ. ಕೂಡಲಚೆನ್ನಸಂಗ ಸತ್ತು ಸಯವಾದ.