ಶರೀರವಿಲ್ಲದಂಗನೆಗೆ ಐವರು ಸ್ತ್ರೀಯರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರೀರವಿಲ್ಲದಂಗನೆಗೆ ಐವರು ಸ್ತ್ರೀಯರು ಹುಟ್ಟಿದರು ನೋಡಾ. ಐವರು ಸ್ತ್ರೀಯರ ವಿಲಾಸದಿಂದ ಅನೇಕ ಕೋಟಿ ಬ್ರಹ್ಮಾಂಡಗಳ ತೋರಿಕೆ ನೋಡಾ. ಪಿಂಡಾಂಡಕ್ಕೆ ತಾವೆ ಅಧಿಷಾ*ನ ಕರ್ತೃಗಳಾಗಿಪ್ಪವು ನೋಡಾ. ಸ್ತ್ರೀಯರೈವರ ಅವರವರ ಭಾವಕ್ಕೆ ನೆರೆದು ಪರಮನೊಬ್ಬನೇ ಪಂಚಪುರುಷನಾಗಿಪ್ಪನು ನೋಡಾ. ಸ್ತ್ರೀಪುರುಷರನೊಳಕೊಂಡು ಅತಿಶಯವಾದ ಅವಿರಳಪರಬ್ರಹ್ಮವೇ ತಾನಾದುದ ಕಂಡು ಬೆರಗಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.