ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶರೀರಾವರಣವಿಲ್ಲದ ಚಿದಾವರಣನ ಕರಣಂಗಳೆಲ್ಲ ಚಿತ್ಕರಣಂಗಳು ನೋಡಾ. ಆತಂಗೆ ಶರೀರ[ಶುಚಿ] ಚಿದ್ಭೂಮಿ ಚಿಜ್ಜಲ ಚಿದಗ್ನಿ ಚಿತ್ಪ್ರಾಣವಾಯು ಚಿದಾಕಾಶಮಯ ನೋಡಾ. ಆ ಚಿದಾಭರಣಂಗೆ ಚಿಚೈತನ್ಯ[ಕೆ] ತ್ವಾನೇ ಪ್ರಾಣಲಿಂಗ ನೋಡಾ. ಆ ಚಿದಾಭರಣ ಶರಣನು ಚಿದ್ಘನಲಿಂಗವ ನೆರೆದು ಪರಾಪರನಾದ ಪರಶಿವಯೋಗಿ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.