ಶಿವಂಗೆ ಅರಿಯರಲ್ಲ. ಐದುಮುಖವಿರ್ಪುದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಂಗೆ ಐದುಮುಖವಿರ್ಪುದ ಸಕಲರು ಬಲ್ಲರು. ಭಕ್ತಂಗೆ ಐದುಮುಖವಿರ್ಪುದನಾರೂ ಅರಿಯರಲ್ಲ. ಆ ಭಕ್ತಂಗೆ ಗುರು ಒಂದು ಮುಖ
ಲಿಂಗ ಒಂದು ಮುಖ
ಜಂಗಮ ಒಂದು ಮುಖ
ಪಾದೋದಕ ಒಂದು ಮುಖ
ಪ್ರಸಾದ ಒಂದು ಮುಖ. ಇಂತೀ ಪಂಚಮುಖವನುಳ್ಳ ಸದ್‍ಭಕ್ತನೇ ಸಾಕ್ಷಾತ್ ಪರಶಿವನು ತಾನೆ ನೋಡಾ ಅಖಂಡೇಶ್ವರಾ.