ವಿಷಯಕ್ಕೆ ಹೋಗು

ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು- ಸಗಣಕ್ಕೆ ಸಾಸಿರ ಹುಳು
ಹುಟ್ಟವೆ ದೇವಾ ಕಾಡ ಮೃಗವೊಂದಾಗಿರಲಾಗದೆ
ದೇವಾ ಊರ ಮೃಗವೊಂದಾಗಿರಲಾಗದೆ
ಹರನೆ ನಮ್ಮ ಕೂಡಲಸಂಗನ ಶರಣರಿಲ್ಲದ ಊರು
ದೇಶ_ ವನವಾಸ
ನರವಿಂಧ್ಯ ಕಾಣಿರಣ್ಣಾ. 156