ಶಿವತತ್ವದ ಆದಿಮಧ್ಯಾವಸಾನವನರಿಯದೆ ಭಕ್ತರೆಂತಪ್ಪಿರಿಯಯ್ಯ? ಶಿವತತ್ವದಾದಿಯೇ ಮಹೇಶ್ವರ. ಶಿವತತ್ವದ ಮಧ್ಯವೇ ಸದಾಶಿವ. ಶಿವತತ್ವದವಸಾನವೇ ಪರತತ್ವ. ಮಾಹೇಶ್ವರನಲ್ಲಿ ತನುವ ನಿಲ್ಲಿಸಿ ಸದಾಶಿವನಲ್ಲಿ ತನ್ನ ಮನವ ಸಾಹಿತ್ಯವ ಮಾಡಲು ಮನೋಮಧ್ಯದಲ್ಲಿ ಪಂಚಬ್ರಹ್ಮಮೂರ್ತಿಯಾಗಿಪ್ಪುನು ನೋಡಾ ಸೂಕ್ಷ ್ಮತತ್ವವು. ಪ್ರಾಣವು ಪರವನಪ್ಪಿ ಪರಾಪರನಾಗಿ ಪ್ರಪಂಚವನೇನುವಂ ಮುಟ್ಟದೆ ಪರಮಮಾಹೇಶ್ವರನಾಗಿರ್ದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.