ಶಿವನಿಗೈದು ಮುಖ
ಭಕ್ತನಿಗೈದು ಮುಖ. ಆವುವಾವುವೆಂದರೆ: ಗುರುವೊಂದು ಮುಖ
ಲಿಂಗವೊಂದು ಮುಖ
ಜಂಗಮವೊಂದು ಮುಖ
ಪಾದೋದಕವೊಂದು ಮುಖ
ಪ್ರಸಾದವೊಂದು ಮುಖ. ಇಂತೀ ಪಂಚಮುಖವನರಿಯದ ವೇಶಿ
ದಾಸಿ
ಸುಂಕಿಗ
ಮಣಿಹಗಾರ
ವಿದ್ಯಾವಂತ ಇಂತೀ ಐವರಿಗೆ ಲಿಂಗವ ಕಟ್ಟಿದಡೆ ಗುಡಿಯ ಮುಂದಣ ಶೃಂಗಾರದ ಗಂಟೆ
ಎಮ್ಮೆಯ ಕೊರಳಗಂಟೆ ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು ! ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ