ಶಿವನೆ ಗುರುವೆಂದು ಗುರುವಿಂಗೆ ತನುವನರ್ಪಿಸಿ
ಶಿವನೆ ಲಿಂಗವೆಂದು ಲಿಂಗಕ್ಕೆ ಮನವನರ್ಪಿಸಿ
ಶಿವನೆ ಜಂಗಮವೆಂದು ಜಂಗಮಕ್ಕೆ ಧನವನರ್ಪಿಸಿ
ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ನಿಜಮುಕ್ತಿಯನೈದಲರಿಯದೆ
ನನ್ನ ಶೀಲ ಹೆಚ್ಚು ತನ್ನ ಶೀಲ ಹೆಚ್ಚೆಂದು ಕುಲಸೂತಕ ಛಲಸೂತಕದಿಂದೆ ಒಬ್ಬರನೊಬ್ಬರು ಹಳಿದಾಡುವ ದುಃಶೀಲವಂತರ ಮೆಚ್ಚುವನೆ ನಮ್ಮ ಅಖಂಡೇಶ್ವರ.