ಶಿವಭಕ್ತರ ರೋಮನೊಂದಡೆ ಶಿವನು ನೋವ ನೋಡಾ. ಶಿವಭಕ್ತರು ಪರಿಣಾಮಿಸಿದಡೆ ಶಿವನು ಪರಿಣಾಮಿಸುವ ನೋಡಾ. ಭಕ್ತದೇಹಿಕದೇವನೆಂದು ಶ್ರುತಿ ಹೊಗಳುವ ಕಾರಣ ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು ನೋಡಾ. ತಾಯಿನೊಂದಡೆ ಒಡಲಶಿಶು ನೋವತೆರನಂತೆ ಭಕ್ತರು ನೊಂದಡೆ ತಾ ನೋವ ನೋಡಾ ಚೆನ್ನಮಲ್ಲಿಕಾರ್ಜುನ.