ಶಿವಯೋಗವಾದಲ್ಲಿ ಸಂಸಾರಯೋಗ ಮಾಬುದಯ್ಯಾ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಯೋಗವಾದಲ್ಲಿ ಸಂಸಾರಯೋಗ ಮಾಬುದಯ್ಯಾ
ಸಂಸಾರಯೋಗ ಮಾದಲ್ಲಿ ಭಕ್ತಾನುಗ್ರಹಯೋಗವಯ್ಯಾ
ಭಕ್ತಾನುಗ್ರಹಯೋಗವಾದಲ್ಲಿ ಲಿಂಗಾನುಗ್ರಹಯೋಗವಯ್ಯಾ
ಲಿಂಗಾನುಗ್ರಹಯೋಗವಾದಲ್ಲಿ ಜಂಗಮಾನುಗ್ರಹಯೋಗವಯ್ಯಾ
ಜಂಗಮಾನುಗ್ರಹಯೋಗವಾದಲ್ಲಿ ಪ್ರಸಾದಾನುಗ್ರಹಯೋಗವಯ್ಯಾ
ಪ್ರಸಾದಾನುಗ್ರಹಯೋಗವಾದಲ್ಲಿ ತ್ರಿವಿಧ ಸನುಮತಯೋಗವಯ್ಯಾ
ತ್ರಿವಿಧ ಸನುಮತಯೋಗವಾದಲ್ಲಿ ಮನಮಗ್ನಯೋಗವಯ್ಯಾ
ಮನಮಗ್ನಯೋಗವಾದಲ್ಲಿ ಕೂಡಲಚೆನ್ನಸಂಗನಲ್ಲಿ ಲಿಂಗಸಂಯೋಗವಯ್ಯಾ.