ಶಿವಲಿಂಗಮೋಹಿತನಾದಡೆ
ಅನ್ಯಮೋಹವ
ಮರೆಯಬೇಕು.
ಶಿವಲಿಂಗ
ಭಕ್ತನಾದಡೆ
ಅನ್ಯದೈವದ
ಭಜನೆ
ಮಾಡಲಾಗದು.
ಶಿವಲಿಂಗಪೂಜಕನಾದಡೆ
ಅನ್ಯದೈವದ
ಪೂಜೆಯ
ಮಾಡಾಗದು.
ಶಿವಲಿಂಗವೀರನಾದಡೆ
ಪುಣ್ಯಕ್ಷೇತ್ರಂಗಳ
ಕುರಿತು
ಹೋಗಲಾಗದು.
ಶಿವಲಿಂಗಪ್ರಸಾದಿಯಾದಡೆ
ಅಂಗಭೋಗವ
ಮರೆಯಬೇಕು.
ಶಿವಲಿಂಗಪ್ರಾಣಿಯಾದಡೆ
(ಪರ)ಸತಿಸಂಗವ
ಮಾಡಲಾಗದು.
ಇದು
ಕಾರಣ_
ಕೂಡಲಚೆನ್ನಸಂಗಯ್ಯನಲ್ಲಿ
ಈ
ಆರು
ಸಹಿತ
ಶಿವಲಿಂಗಭಕ್ತಿ.