ಶಿವಶರಣ ತಾನಾದ ಬಳಿಕ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಶರಣ ತಾನಾದ ಬಳಿಕ
ಹರಗಣಂಗಳಂಘ್ರಿಯಲ್ಲಿ ನಮ್ರಲಲಾಟನಾಗಿರಬೇಕು. ಪತಿವ್ರತೆ ತಾನಾದ ಬಳಿಕ
ವಲ್ಲಭನ ಸರ್ವೋಪಚಾರದಲ್ಲಿ ಲೀನೆಯಾಗಿರಬೇಕು. ಇದು ಕಾರಣ_ ಶಿವಶರಣರು ಹರಗಣಂಗಳ ಕಂಡು ಮಣಿಯದಿದ್ದಡೆ ಕೂಡಲಚೆನ್ನಸಂಗಮದೇವರು ಕೊಡುವ ಮುಕ್ತಿಯಲ್ಲಿ ಮೌನರು ಕಾಣಾ ಸಿದ್ಧರಾಮಯ್ಯ.