ವಿಷಯಕ್ಕೆ ಹೋಗು

ಶಿವಶಿವಾಯೆಂಬುದು ಭವದುರಿತದೋಟ ಕಂಡಯ್ಯ.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಶಿವಶಿವಾಯೆಂಬುದು ಭವದುರಿತದೋಟ ಕಂಡಯ್ಯ. ಹರಹರಯೆಂಬುದು ಹರಣದ ತೊಡಕಿನ ಮರಣವ ಪರಿಹರಿಸುವುದು ನೋಡಾ. ಇದು ಕಾರಣ
ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿಯು `ಓಂ ನಮಃಶಿವಾಯ ಓಂ ನಮಃಶಿವಾಯ ಓಂ ನಮಃಶಿವಾಯ' ಎಂಬ ಪ್ರಣವ ಪಂಚಾಕ್ಷರಿಯನೆ ಸ್ಮರಿಸುತಿರ್ದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.