ಶಿವಶಿವಾ, ಬೇಡ, ಎನ್ನ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಶಿವಾ
ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ. ಎನಗೆ ಭಕ್ತಿ ಬೇಡ
ಎನಗೆ ಜ್ಞಾನ ಬೇಡ
ಎನಗೆ ವೈರಾಗ್ಯ ಬೇಡ
ಎನಗೆ ವಿರತಿಯು ಬೇಡ
ನಿಮ್ಮ ಶರಣರು ಉಟ್ಟ ಮೈಲಿಗೆಯ ಬಟ್ಟೆ ಉಗುಳಿದ ತಾಂಬೂಲ
ಒಕ್ಕು ಮಿಕ್ಕ ಪ್ರಸಾದವನೆ ಕರುಣಿಸಿ
ಅವರ ಪಡುಗ ಪಾದರಕ್ಷೆಯನೆ ಹಿಡಿವುದಕ್ಕೆ ಯೋಗ್ಯನ ಮಾಡಿ
ಅವರ ಕಡೆಯ ಬಾಗಿಲನೆ ಕಾಯುವಂತೆ ಮಾಡಯ್ಯ ಎನ್ನ ಅಖಂಡೇಶ್ವರಾ.