ವಿಷಯಕ್ಕೆ ಹೋಗು

ಶಿವಶಿವಾ ಧರಿಸಿ, ಎಂದು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಶಿವಶಿವಾ ಎಂದು ಶಿವನ ಕೊಂಡಾಡುತ್ತ ಶ್ರೀ ವಿಭೂತಿಯ ಧರಿಸಿ
ಶ್ರೀ ಮಹಾದೇವನ ಪೂಜಿಸುವಾತನ ಕಾಯವೇ ಕೈಲಾಸ. ಆತನ ನಡೆಯೇ ಪಾವನ
ಆತನ ನುಡಿಯೇ ಆಗಮ. ಆತನ ದರುಶನ ಸ್ಪರುಶನವೇ ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು ನೋಡಾ ! ಆ ಮಹಾತ್ಮನಿಂದಧಿಕರು ಮೂಲೋಕದೊಳಗಿಲ್ಲ ನೋಡಾ ಅಖಂಡೇಶ್ವರಾ.