ಶಿವಸ್ವರೂಪವನರಿದು ಶಿವನೊಡನಾಡಿ ಶಿವನೊಡನುಂಡು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವಸ್ವರೂಪವನರಿದು ಶಿವನೊಡನಾಡಿ ಶಿವನೊಡನುಂಡು ಶಿವಾಕಾರವಾದ ಶಿವಭಕ್ತನು ದೇವ ದಾನವ ಮಾನವಾದಿಗಳಲ್ಲಿರ್ದಡೇನು ? ಆತನು ಹುಟ್ಟುಗೆಟ್ಟನಾಗಿ. ಆವ ಕುಲ ಜಾತಿಗಳಲ್ಲಿ ಹುಟ್ಟಿದಡೇನು ? ಶಿವಜ್ಞಾನಸಿದ್ಧನಾದ ಶಿವಭಕ್ತನು ಸಾಧಕರಂತೆ ವರ್ಣಾಶ್ರಮದ ಅಭಿಮಾನಕ್ಕೊಳಗಪ್ಪನೆ ? ಇಲ್ಲಿಲ್ಲ. ಶಿವಭಕ್ತಾ ಮಹಾತ್ಮಾನಸ್ಸಂತಿ ದೇವೇಷು ಕೇಚನ ದೈತ್ಯೇಷು ಯಾತುಧಾನೇಷು ಯಕ್ಷಗಂಧರ್ವಭೋಗಿಷು ಮುನೀಶ್ವರೇಷು ಮೂರ್ತೇಷು ಬ್ರಾಹ್ಮಣೇಷು ನೃಪೇಷು ಚ ಊರುಜೇಷು ಚ ಶೂದ್ರೇಷು ಸಂಕರೇಷ್ವಪಿ ಸರ್ವಶಃ ವರ್ಣಾಶ್ರಮವ್ಯವಸ್ಥಾಶ್ಚ ನೈಷಾಂ ಸಂತಿ ಮುನೀಶ್ವರಾಃ ಕೇವಲಂ ಶಿವರೂಪಾಸ್ತೇ ಸರ್ವೇ ಮಾಹೇಶ್ವರಾಃ ಸ್ಮೃತಾಃ ಎಂದುದಾಗಿ
ಹೇಯವಾದ ಮಾಯೆಯ ನಾಯಿಯಂತೆ ಅಳಿದುಳಿದು ಭಕ್ತನು ಮಾಹೇಶ್ವರನೆನಿಸಿಕೊಂಬನಾಗಿ
ಜಡ ಮಾಯಾಧರ್ಮವ ಹೊದ್ದಲಮ್ಮನು ಕಾಣಾ. ಕೂಡಲಚೆನ್ನಸಂಗಮದೇವಾ