ಶಿವ ಲೋಕವನಿಚ್ಛಿಸಿ ಶಿವಪೂಜೆಯಂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವ ಲೋಕವನಿಚ್ಛಿಸಿ ಶಿವಪೂಜೆಯಂ ಗೈದೊಡೆ ಮುಂದೆ ಶಿವಲೋಕವನೈದಿ ಅನಂತಕಾಲ ಶಿವಸುಖವನನುಭವಿಸುತಿರ್ದು ಆ ಪುಣ್ಯವು ತೀರಲೊಡನೆ ಮರಳಿ ಧರೆಗಿಳಿದು ಪೂರ್ವಪುಣ್ಯಸಂಸ್ಕಾರದಿಂದ ಸತ್ಕುಲದಲ್ಲಿ ಹುಟ್ಟುತಿರ್ಪನು ನೋಡಾ ! ``ಅನೇಕಯುಗಸಾಹಸ್ರಂ ಭುಕ್ತ್ವಾ ಭೋಗಾನನೇಕಧಾ ಪುಣ್ಯೇ ಕ್ಷಯೇ ಕ್ಷೀಣಪಾಪಃ ಕುಲೇ ಮಹತಿ ಜಾಯತೇ ' ಎಂದುದಾಗಿ
ಶಿವಕುಲದಲ್ಲಿ ಹುಟ್ಟಿ ಶಿವಸಂಸ್ಕಾರ ಹೊಂದಿ ಸದ್ಗುರುವಿನಿಂದ ಲಿಂಗಸಾಮರಸ್ಯ ಪಡೆದು ಅಷ್ಟಾವರಣವೆ ಅಂಗ
ಪಂಚಾಚಾರವೆ ಪ್ರಾಣವಾಗಿ ನಡೆದು ಕಡೆಗೆ ಚಿರಸುಖಿಯಾಗುತಿರ್ಪನು ನೋಡಾ ಕೂಡಲಚೆನ್ನಸಂಗಮದೇವಾ