ಶಿವ ಶಿವಾ ಆವನಾನೊಬ್ಬನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶಿವ ಶಿವಾ ಆವನಾನೊಬ್ಬನು ಶ್ರೀಮಹಾದೇವನ ದಿವ್ಯಕಾಂತಿಯಿಂದೊಗೆದ ಶ್ರೀಮಹಾಭಸಿತವ ಬಿಟ್ಟು ಹಣೆಯಲ್ಲಿ ಗೋಪಿ ಮಲಿನ ಸಾದು ಕಸ್ತೂರಿ ಚಂದನಗಳೆಂಬ ಮಣ್ಣುಮಸಿಗಳಿಂದ ನೀಳ ಬೊಟ್ಟು ಕಾಗೆವರೆಬೊಟ್ಟು
ಹೂಬೊಟ್ಟು ಅರ್ಧಚಂದ್ರರೇಖೆ
ಅಂಕುಶದ ರೇಖೆ ಮೊದಲಾದ ಕಾಕುವರೆಗಳ ವಿಶ್ವಾಸದಿಂದ ಇಡುತಿಪ್ಪ ಪಾತಕರ ಮುಖವ ನೋಡಲಾಗದು. ಸುಡು ! ಅದು ಅಶುದ್ಧ
ಅದು ಪಾಪದ ರಾಶಿ
ಅದ ನೋಡಿದಡೆ ಮಹಾದೋಷ ಅದೆಂತೆಂದಡೆ
ಪಾರಾಶರಪುರಾಣದಲ್ಲಿ: ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ ಮತ್ತಂ ಶಾಂಭವಪುರಾಣದಲ್ಲಿ: ಅಶುದ್ಧಂಚ ತಥಾ ಪ್ರೋಕ್ತಂ ವರ್ತುಲಂ ಚೋಧ್ರ್ವಪುಂಡ್ರಕಂ ಅಶುದ್ಧಂ ಚಾರ್ಧಚಂದ್ರಂ ಚ ಕೀರ್ತಿತಂ ತು ಕುಶಾದಿಭಿಃ ಮತ್ತಂ ಸೂತಸಂಹಿತೆಯಲ್ಲಿ: ಅಶ್ರೌತಂ ಚೋಧ್ರ್ವಪುಂಡ್ರಂ ತು ಲಲಾಟೇ ಶ್ರದ್ಧಯಾ ಸಹ ಧಾರಯಿಷ್ಯಂತಿ ಮೋಹೇನ ಪಾಷಂಡೋಪಹತಾ ಜನಾಃ ಮತ್ತಂ ಮಾನವಪುರಾಣದಲ್ಲಿ: ಊಧ್ರ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ ತತ್ವನಿಷೆ*ೈರ್ನ ಧಾರ್ಯಂ ಚ ನ ಧಾರ್ಯಂ ವೈದಿಕೈರ್ಜನೈಃ ಊಧ್ರ್ವಪುಂಡ್ರಂ ಮುಖಂ ದೃಷ್ಟ್ವಾ ವ್ರತಂ ಚಾಂದ್ರಾಯಣಂ ಚರೇತ್ ಮತ್ತಂ ಸ್ಕಂದಪುರಾಣದಲ್ಲಿ: ಊಧ್ರ್ವಪುಂಡ್ರಂ ದ್ವಿಜಃ ಕುರ್ಯಾತ್ ಲೀಲಯ್ಯಾಪಿ ಕದಾಚನ ತದಾಕಾರೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈ ಎಂದುದಾಗಿ
ಶ್ರೀಮಹಾವಿಭೂತಿಯ ಬಿಟ್ಟು ವೇದವಿರುದ್ಧವಾದ ಮಟ್ಟಿಮಸಿಗಳ ಹಣೆಯಲ್ಲಿ ಇಡುತಿಪ್ಪ ಪಂಚಮಹಾಪಾತಕರ ಮುಸುಡ ನೋಡಲಾಗದು ಕಾಣಾ ಕೂಡಲಚೆನ್ನಸಂಗಮದೇವಾ