ಶೀಲವಂತ ಗುರುಭಕ್ತಿಯಿಂದೆ ಶೀಲವಂತರೆಂದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶೀಲವಂತ ಶೀಲವಂತರೆಂದು ಶೀಲಸಂಪಾದನೆಯ ಮಾಡುವ ಕರ್ಮಿಗಳನೇನೆಂಬೆನಯ್ಯಾ ! ಗುರುಭಕ್ತಿಯಿಂದೆ ತನುಶುದ್ಧವಾಗಲಿಲ್ಲ. ಲಿಂಗಭಕ್ತಿಯಿಂದೆ ಮನಶುದ್ಧವಾಗಲಿಲ್ಲ. ಜಂಗಮದಾಸೋಹದಿಂದೆ ಧನಶುದ್ಧವಾಗಲಿಲ್ಲ. ಸಟೆಯ ಸಂಸಾರಶರಧಿಯೊಳಗೆ ಮುಳುಗಿ ಕುಟಿಲವ್ಯಾಪಾರವನಂಗೀಕರಿಸಿ
ನಾವು ದಿಟದ ಶೀಲವಂತರೆಂದು ನುಡಿದುಕೊಂಬ ಫಟಿಂಗ ಭಂಡರ ವಿಧಿ ಎಂತಾಯಿತ್ತೆಂದರೆ
ಹೆಂಡದ ಮಡಕೆಗೆ ವಿಭೂತಿಮಂಡಲವ ಬರೆದಂತಾಯಿತ್ತು ಕಾಣಾ ಅಖಂಡೇಶ್ವರಾ.