Library-logo-blue-outline.png
View-refresh.svg
Transclusion_Status_Detection_Tool

ಶುದ್ಧಪದ್ಮಾಸನದಲ್ಲಿ ಸ್ಥಾನದಲ್ಲಡಗಿಸಿ, ಕುಳ್ಳಿರ್ದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಶುದ್ಧಪದ್ಮಾಸನದಲ್ಲಿ ಕುಳ್ಳಿರ್ದು ಊಧ್ರ್ವಲೋಚನನಾಗಿ
ಉಲಿವ ಕರಣಂಗಳನೆಲ್ಲ ಉನ್ಮನಿಯ ಸ್ಥಾನದಲ್ಲಡಗಿಸಿ
ಮನವನೊಮ್ಮನವ ಮಾಡಿ ಅನಾಹತಕರ್ಣದಲ್ಲಿ ಲಾಲಿಸಲು
ಸಹಸ್ರದಳಕಮಲಮಧ್ಯದಲ್ಲಿ ಉದ್ಘೋಷಿಸುತ್ತಿರ್ಪುದು ಸುನಾದಬ್ರಹ್ಮವು. ಅಂತಪ್ಪ ಸುನಾದಬ್ರಹ್ಮದಲ್ಲಿ ಮನವಡಗಿ ಮೈಯ್ಮರೆದಿರ್ಪಾತನೆ ಘನಲಿಂಗಯೋಗಿಯಯ್ಯಾ ಅಖಂಡೇಶ್ವರಾ.