ಶುದ್ಧವ ಗುರುವಿಂಗೆ ಕೊಟ್ಟು,
ಗೋಚರ
ಲೇಖಕರು: Basavanna
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಶುದ್ಧವ ಗುರುವಿಂಗೆ ಕೊಟ್ಟು
ಶುದ್ಧವಾಯಿತ್ತೆಂಬೆನಯ್ಯಾ
ಸಿದ್ಧವ ಲಿಂಗಕ್ಕೆ ಕೊಟ್ಟು
ಸಿದ್ಧವಾಯಿತ್ತೆಂಬೆನಯ್ಯಾ
ಪ್ರಸಿದ್ಧವ ಜಂಗಮಕ್ಕೆ ಕೊಟ್ಟು
ಪ್ರಸಿದ್ಧವಾಯಿತ್ತೆಂಬೆನಯ್ಯಾ. ಗುರುಲಿಂಗಜಂಗಮವ ಏಕತ್ರಯವಾಗಿ ಕಾಣಲರಿಯದಿದ್ದಡೆ ಶುದ್ಧ ಸಿದ್ಧ ಪ್ರಸಿದ್ಧ ಒಡನೆ ನಗುತ್ತೈದಾವೆ. ತನುಮನಧನವ ನಿವೇದಿಸಲರಿಯೆನಾಗಿ ಕೂಡಲಸಂಗಮದೇವ
ಒಲಿ ಎಂದಡೆಂತೊಲಿವ